ಬೆಂಗಳೂರು, ಮಾ.೪: ಕೆಎಸ್ಆರ್ಟಿಸಿ ಬಸ್ಗಳ ಪ್ರಯಾಣ ದರದ್ಲಲಿ ಶೇ. ೪.೭೬ರಷ್ಟು ಏರಿಕೆಯಾಗಿದೆ. ಈ ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ತೈಲ ದರ ಏರಿಕೆಯಾದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ ಎಂದು ಕೆ.ಎಸ್ಆರ್ಟಿಸಿ ಹೇಳಿದೆ. ಕೇಂದ್ರ ಸರ್ಕಾರ ಕಳೆದ ೨೬ ರಂದು ಡೀಸೆಲ್ಟಿ ದರವನ್ನು ಪ್ರತಿ ಲೀಟರ್ಗೆ ೨.೭೩ ರಷ್ಟು ಏರಿಕೆ ಮಾಡಿತ್ತು.
ಈ ನಿರ್ಧಾರದಿಂದಾಗಿ ಸಾರಿಗೆ ಸಂಸ್ಥೆಗೆ ವಾಷಿಕ ೪೮.೩೫ ಕೋಟಿಗಳಷ್ಟು ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರ ಹೆಚ್ಚಳದ ತೀರ್ಮಾನಕ್ಕೆ ರಲಾಗಿದೆ. ಅಲ್ಲದೆ ವಾಯುವ್ಯ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆಗಳ ಬಸ್ಗಳ ಪ್ರಯಾಣ ರದದಲ್ಲೂ ಹೆಚ್ಚಳ ಮಾಡಲಾಗಿದೆ.
ಆದರೆ ಗ್ರಾಮೀಣ ಸಾಮಾನ್ಯ ಸಾರಿಗೆಗಳ ಮೊದಲ ೪ ಹಂತಗಳಲ್ಲಿ ದರ ಹೆಚ್ಚಳ ಇರುವುದಿಲ್ಲ ಎಂದು ಸಂಸ್ಥೆಯ ಮುಖ್ಯ ವ್ಯವಸ್ಥಾಪಕರು ಹೇಳಿದ್ದಾರೆ.
ಬಿಎಂಟಿಸಿ ಪ್ರಯಾಣ ದರ ಏರಿಕೆಯಿಲ್ಲ:ಬಿಬಿಎಂಪಿ ಚುನಾವಣೆ ಎಫೆಕ್ಟ್ ಇದರ ಮೇಲೂ ಬಿದ್ದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಚಿಟಿಸಿ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ.
ಕೆಎಸ್ ಆರ್ಟಿಸಿ ದರ ಪಟ್ಟಿ (ರೂ.ಗಳಲ್ಲಿ)
ದೂರ ವೇಗದೂತ ರಾಜಹಂಸ
ಬೆಂಗಳೂರಿಂದ ಹಾಲಿ-ಪರಿಷೃತ ಹಾಲಿ ಪರಿಷೃತ
ಮೈಸೂರು ೮೧-೮೫ ೧೨೫-೧೩೧
ಮಂಗಳೂರು ೨೦೪-೨೧೫ ೩೧೭-೩೩೨
ಹುಬ್ಬಳ್ಳಿ ೨೩೭-೨೫೧ ೩೬೮-೩೮೫
ಮಂಡ್ಯ ೫೫-೫೮ ೮೫-೮೯
ಧಾರವಾಡ ೨೪೮-೨೬೨ ೩೮೫-೪೦೩
ಬಳ್ಳಾರಿ ೧೮೨-೧೯೩ ೨೮೩-೨೯೬
ದಾವಣಗೆರೆ ೧೫೩-೧೬೩ ೨೩೮-೨೪೯
ಶಿವಮೊಗ್ಗ ೧೬೧-೧೭೦ ೨೪೯-೨೬೧
ಬೆಳಗಾವಿ ೨೯೨-೩೦೮ ೪೫೩-೪೭೪